Search This Blog

Saturday, June 20, 2020

2)ಮಹಾಭಾರತ ಬರೆದ ಕನ್ನಡದ ವ್ಯಾಸ

ಚಿತ್ರ ಕೃಪೆ: Pinterest

 ಮಹಾಭಾರತ ಎಂಬ ಪದವನ್ನು ಕೇಳಿದಾಗ, ನಾವು ಕನ್ನಡಿಗರು ನಮ್ಮವರೇ ಆದ "ಕುಮಾರ ವ್ಯಾಸ"ರನ್ನು ನೆನಪಿಸಿಕೊಳ್ಳುತ್ತೇವೆ. ಹೌದು! ಸಂಸ್ಕೃತ ಲಿಖಿತ ಮಹಾಭಾರತ ಕಾವ್ಯವನ್ನು ಕನ್ನಡದಲ್ಲಿ ರಚಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಕೃತಿ "ಕರ್ನಾಟ ಭಾರತ ಕಥಾಮಂಜರಿ" ಅಥವಾ "ಗದಗಿನ ಭಾರತ" ಎಂಬ ಹೆಸರಿನಿಂದ ಪ್ರಸಿದ್ಧಿ ಪಡೆದಿದೆ. ಇದಕ್ಕೆ ಕುಮಾರ ವ್ಯಾಸ ಭಾರತ ಹಾಗೂ ಕನ್ನಡ ಭಾರತ ಎಂದು ಸಹ ಕರೆಯುತ್ತಾರೆ. ಕುಮಾರ ವ್ಯಾಸರು ಸುಮಾರು 14ನೇ ಶತಮಾನದ ಕವಿಗಳಾಗಿದ್ದರು ಎಂದು ಇತಿಹಾಸಕಾರರು ಊಹಿಸಿದ್ದಾರೆ. ಇವರು ಅಂದಿನ ಗದಗಿನ ಕೋಳಿವಾಡದಲ್ಲಿ ನಾರಾಯಣಪ್ಪರಾಗಿ ಜನಿಸಿದರು (ಇಂದು ಧಾರವಾಡ ಜಿಲ್ಲೆಯಲ್ಲಿದೆ). ಕನ್ನಡದ ಮೊದಲ ಮಹಾಭಾರತವನ್ನು ರಚಿಸಿದ ಇವರಿಗೆ "ಕುಮಾರ ವ್ಯಾಸ" ಎಂಬ ಬಿರುದು ಬಂತು. ಇವರ ಕೃತಿ ನಡುಗನ್ನಡದ ಭಾಮಿನಿ ಷಟ್ಪದಿಯಲ್ಲಿ ಬಹಳ ಸೊಗಸಾಗಿ ಮೂಡಿಬಂದಿದೆ. ಇವರ ಕುರಿತು ಕುವೆಂಪುರವರು ಹೀಗೆ ವರ್ಣಿಸಿದ್ದಾರೆ "ಕುಮಾರ ವ್ಯಾಸನು ಹಾಡಿದನೆಂದರೆ ಕಲಿಯುಗವು ದ್ವಾಪರವಾಗುವುದು, ಭಾರತ ಕಣ್ಣಲ್ಲಿ ಕುಣಿಯುವುದು! ಮೈಯಲ್ಲಿ ಮಿಂಚಿನ ಹೊಳೆ ತುಳುಕಾಡುವುದು".

Sunday, June 14, 2020

2) Mahabharata by Karnataka's Vyasa


Pic credit: Pinterest

When we hear the word Mahabharata, we kannadigas always remember our very own "Kumara Vyasa". Yes! he is credited with compiling the Sanskrit epic Mahabharata in Kannada. His work is popularly known as "Karnata Bharata Kathamanjari" or "Gadagina bharata" (attributed to his place Garage). It is also known as Kumara Vyasa Bharata and Kannada Bharata. Historians speculate that Kumara was a poet of the 14th century. He was born as Narayanappa in koliwada village(now in Dharwad district). He created the first Mahabharata in Kannada language and was entitled "Kumara Vyasa" (son of Vyasa) because of his work. His work is very elegantly embodied in nadugannada(middle Kannada) in the form of 6 lines stanza. Kuvempura describes him as "When Kumara Vyasa sings Kaliyuga will be gateway to dwaparayuga"

1) Veda Vyasa

                            Pic Credit: Pinterest


The Mahabharata is the lengthiest written epic in the world and is the greatest of all time. The Mahabharata is always remembered by the Pandavas and the Kauravas. Another name to remember is "Veda Vyasa"! Yes, he deserves credit for creating such a great poem and we are forever indebted to him. Besides the Mahabharata, he classified Vedas and Upanishads which is a boon to Hinduism.

Saturday, June 13, 2020

1)ವೇದ ವ್ಯಾಸ

                            ಚಿತ್ರ ಕೃಪೆ:Pinterest

ಮಹಾಭಾರತವು ಜಗತ್ತಿನ ಸುಧೀರ್ಘ ಹಾಗೂ ಇಲ್ಲಿಯವರೆಗೂ ಲಿಖಿತ ರೂಪದಲ್ಲಿರುವ ಉದ್ದನೆಯ ಮಹಾಕಾವ್ಯವಾಗಿದೆ. ಅದು ಸಾರ್ವಕಾಲಕ್ಕೂ ಶ್ರೇಷ್ಠವೆಂದರೆ ತಪ್ಪಾಗಲಾರದು. ಮಹಾಭಾರತ ಎಂದಾಕ್ಷಣ ನೆನಪಾಗುವುದು ಪಾಂಡವರು ಮತ್ತು ಕೌರವರು. ಅದರ ಜೊತೆಗೆ ಸ್ಮರಿಸಲೇ ಬೇಕಾದ ಮತ್ತೊಂದು ಹೆಸರು "ವೇದ ವ್ಯಾಸ"! ಹೌದು,ಇಂತ ಶ್ರೇಷ್ಠ ಕಾವ್ಯವನ್ನ ರಚಿಸಿದ ಶ್ರೇಯ ಅವರಿಗೆ ಸಲ್ಲತಕದ್ದು ಹಾಗೂ ನಾವೆಲ್ಲರೂ ಅವರಿಗೆ ಸದಾ ಋಣಿಯಾಗಿರುವುದು. ಮಹಾಭಾರತವಲ್ಲದೆ ವೇದ ಉಪನಿಷದಗಳನ್ನ ರಚಿಸಿ ಹಿಂದೂ ಧರ್ಮಕ್ಕೆ ಬಳುವಳಿಯಾಗಿ ನೀಡಿದ್ದಾರೆ.