ಚಿತ್ರ ಕೃಪೆ: Pinterest
ಕುಮಾರ ವ್ಯಾಸ ಸ್ತoಭ, ನಾರಾಯಣ ದೇವಾಲಯ
ಚಿತ್ರ ಕೃಪೆ:Pinterest
ಕನ್ನಡದ ಮಹಾಭಾರತ ಹೇಗೆ ಬರೆಯಲಾಗಿದೆ ಎಂಬುದರ ಹಿಂದಿನ ಕಥೆ ಬಹಳ ರೋಮಾಂಚನವಾಗಿದೆ. ಸಾಕ್ಷಾತ್ ಶ್ರೀ ನಾರಾಯಣನು ಕುಮಾರ ವ್ಯಾಸನ ಕನಸಿನಲ್ಲಿ ಬಂದು ಮಹಾಭಾರತವನ್ನು ಪಠಿಸುವುದಾಗಿ ಹೇಳಿ ಅದನ್ನು ಬರೆಯುವಂತೆ ಕೇಳಿಕೊಂಡನು. ಆದರೆ ಅವನಿಗೆ ಎರಡು ಷರತ್ತುಗಳನ್ನು ಹಾಕಲಾಯಿತು. ಮೊದಲನೆಯದು ಕುಮಾರ ವ್ಯಾಸನು ಗದಗಿನಲ್ಲಿರುವ ನಾರಾಯಣ ದೇವಸ್ಥಾನಕ್ಕೆ ಬಂದು ಕೃತಿಯನ್ನು ರಚಿಸಬೇಕು ಮತ್ತು ಎರಡನೆಯದು ಮಹಾಕಾವ್ಯವನ್ನು ಪಠಿಸುವ ಧ್ವನಿ ಬರುವ ಮೂಲವನ್ನು ಕಂಡುಹಿಡಿಯಲು ಪ್ರಯತ್ನಿಸಬಾರದು. ಕುಮಾರ ವ್ಯಾಸ ಶ್ರದ್ಧಾ ಭಾವದಿಂದ ದೇವಸ್ಥಾನದಲ್ಲಿರುವ ನಾರಾಯಣನ ಪ್ರತಿಮೆಯ ಹಿಂದಿನಿಂದ ಬರುತ್ತಿದ್ದ ಧ್ವನಿಯಿಂದ ಬರೆಯಲು ಪ್ರಾರಂಭಿಸಿದನು. ಭೀಮ ಮತ್ತು ದುರ್ಯೋಧನನ (ಗಧಾ ಯುದ್ದ) ನಡುವಿನ ಹೋರಾಟವನ್ನು ಚಿತ್ರಿಸುವ 10 ನೇ ಅಧ್ಯಾಯವನ್ನು ಪೂರ್ಣಗೊಳಿಸಲು ಅವರು ಬಹಳ ಹತ್ತಿರದಲ್ಲಿದ್ದರು. ಅಷ್ಟೊತ್ತಿಗೆ ಹಲವಾರು ವರ್ಷಗಳು ಕಳೆದುಹೋಗಿದ್ದವು. ಅವರು ಗಧಾ ಯುದ್ದವನ್ನು ಪೂರ್ಣಗೋಳಿಸುವ ಹೊತ್ತಿಗೆ ಅವರ ಕುತೂಹಲವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ದೈವಿಕ ಧ್ವನಿಯ ಮೂಲವನ್ನ ಹುಡುಕುತ್ತಾ ನಾರಾಯಣನ ವಿಗ್ರಹದ ಹಿಂದೆ ಹೋಗಿ ನೋಡಿದಾಗ ಸ್ವತಃ ಶ್ರೀಮನ್ನಾರಾಯಣ ಮಹಾಭಾರತವನ್ನು ಪಠಿಸುತ್ತಿರುವುದನ್ನು ಕಂಡು ಆಶ್ಚರ್ಯಚಕಿತರಾದರು ಮತ್ತು ವಿಗ್ರಹದ ಹಿಂದೆ ಇಡೀ ಮಹಾಭಾರತದ ದೃಶ್ಯಗಳು ನಡೆಯುತ್ತಿರುವುದನ್ನು ನೋಡಿ ಮುಕಸ್ಮಿತನಾದನು. ಕುಮಾರವ್ಯಸ ವಾಗ್ದಾನವನ್ನು ಮುರಿದಿದ್ದರಿಂದ ನಾರಾಯಣ ಪಠಣವನ್ನು ನಿಲ್ಲಿಸಿದನು. ಕುಮಾರವ್ಯಸ ನಾರಾಯಣನಿಗೆ ದ್ರೋಹ ಮಾಡಿದ್ದನೆಂದು ಭಾವಿಸಿ ಮಹಾ ಕಾವ್ಯವನ್ನು ಪೂರ್ಣಗೊಳಿಸಲಿಲ್ಲ. ಅವರು ಮಹಾಭಾರತವನ್ನು ಅಪೂರ್ಣವಾಗಿ ಬಿಟ್ಟರು ಆದರೆ ಅವರು ನಾರಾಯಣನಿಂದ ನಿರ್ದೇಶಿಸಲ್ಪಟ್ಟದ್ದನ್ನು ಮಾತ್ರ ಬರೆದಿದ್ದಾರೆ ಎಂದು ನಂಬಿಕೆಯಿದೆ. ಅರ್ಧಕ್ಕೆ ಬಿಟ್ಟಿದ್ದ ಕಾವ್ಯವನ್ನು ಮುಂದೆ ವಿಜಯನಗರ ಸಾಮ್ರಾಜ್ಯದ ಮತ್ತೋರ್ವ ಕವಿ ಪೂರ್ಣಗಳಿಸಿದ್ದಾರೆ.
ಇದಿಷ್ಟು ಕನ್ನಡದ ಮಹಾಭಾರತದ ಹಿಂದಿರುವ ಕರ್ತೃ ಹಾಗೂ ಕೃತಿಯ ಕಥೆ!
No comments:
Post a Comment