ಚಿತ್ರ ಕೃಪೆ:Pinterest
ವ್ಯಾಸರು ಮಹಾಭಾರತದ ಸಂಕಲನಕಾರರಾಗಿ ಅಲ್ಲದೆ ಮಹಾಭಾರತ ಕತೆಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.ವೇದದ ಜ್ಞಾನವನ್ನ ಮೌಖಿಕ ಸಂಪ್ರದಾಯದಿಂದ ಲಿಖಿತ ರೂಪಕ್ಕೆ ತರಲು ದ್ವಾಪರಯುಗದಲ್ಲಿ ಜನಿಸಿದ ವಿಷ್ಣುವಿನ ವಿಸ್ತರಣೆ ಎಂಬ ಪ್ರತೀತಿ ಇದೆ. ವಿಷ್ಣುವಿನ ಆಜ್ಞೆಯ ಮೇರೆಗೆ ಸತ್ಯವತಿ ಹಾಗೂ ಋಷಿ ಪರಾಶರರ ಮಗುವಾಗಿ ಮರು ಜನ್ಮಿಸುತ್ತಾರೆ. ವ್ಯಾಸರು ಯಮುನಾ ನದಿಯ ತೀರದ ದ್ವೀಪದಲ್ಲಿ ಜನಿಸಿದ ಕಾರಣ ಹಾಗೂ ಅವರ ಕಡು ಮೈಬಣ್ಣದ ಕಾರಣ ಅವರಿಗೆ ಕೃಷ್ಣ ದ್ವೈಪಾಯನ ಎಂಬ ಹೆಸರಿದೆ.
ಚಿತ್ರ ಕೃಪೆ: Pinterest
ಮಹಾಭಾರತವು ಸುಮಾರು ಕ್ರಿ.ಪೂ. 9 ರಿಂದ 8ನೇ ಶತಮಾನದಲ್ಲಿ ನಡೆದಿರುವುದಾಗಿ ಉಲ್ಲೇಖಗಳಿವೆ. ಹಾಗೂ ಇದನ್ನೂ 3 ವರ್ಷದ ಅವಧಿಯಲ್ಲಿ ರಚಿಸಲ್ಪಟ್ಟಿದೆ ಎಂದು ಹೇಳಲಾಗಿದೆ. ಮಹಾಭಾರತ ರಚನೆ ಹಿಂದಿರುವ ಕಥೆಯೇ ರೋಚಕ! ಮಹಾಭಾರತವನ್ನು ಋಷಿ ವ್ಯಾಸರು ನಿರೂಪಿಸಿರುವುದಾಗಿ ಹಾಗೂ ಇದನ್ನು ಗಣೇಶನು ಬರೆದಿರುವುದಾಗಿ ಹೇಳಲಾಗಿದೆ. ಇಂತ ಮಹಾಕಾವ್ಯವನ್ನು ರಚಿಸುವ ಸಮರ್ಥ ವ್ಯಕ್ತಿಯನ್ನು ಅರಿಸಿ ಋಷಿ ವ್ಯಾಸರು ಸೃಷ್ಟಿ ಕರ್ತ ಬ್ರಹ್ಮನನ್ನು ಜಪಿಸಿ, ಮಹಾಭಾರತದ ನಿರೂಪಣೆಯನ್ನು ಬರೆಯಬಲ್ಲ ಸಮರ್ಥ ವ್ಯಕ್ತಿಯನ್ನು ಸೂಚಿಸಲು ಕೋರಿದನು. ಆಗ ಬ್ರಹ್ಮ ದೇವರು ಗಣೇಶನನ್ನು ಧ್ಯಾನಿಸುವಂತೆ ಸೂಚಿಸಿ ಅವನನ್ನು ಒಲಿಸಲು ತಿಳಿಸಿದನು. ಅದರಂತೆ ವ್ಯಾಸರು ಗಣೇಶನನ್ನು ಒಲಿಸಿಕೊಂಡು ಅವನಿಂದ ಒಪ್ಪಿಗೆ ಪಡೆದರು. ವ್ಯಾಸರು ಹೆಚ್ಚು ಶ್ರಮವಿಲ್ಲದೆ ಮಹಾಕಾವ್ಯವನ್ನು ಸುಲಭವಾಗಿ ರಚಿಸುವುದರ ಬಗ್ಗೆ ಅರಿತಿದ್ದ ಚಾಣಾಕ್ಷ ಗಣೇಶನು ವ್ಯಾಸರನ್ನು ಪರೀಕ್ಷಿಸಲು ಷರತ್ತನ್ನು ಹಾಕುತ್ತಾನೆ. ವ್ಯಾಸರು ನಿರೂಪಣೆ ಶುರು ಮಾಡಿದ ನಂತರ ಯಾವುದೇ ಕಾರಣಕ್ಕೂ ನಿಲ್ಲಿಸುವಂತಿಲ್ಲ ಹಾಗೆ ನಿಲ್ಲಿಸಿದ ಪಕ್ಷದಲ್ಲಿ ಗಣೇಶನು ತನ್ನ ಬರೆಯುವ ಕಾರ್ಯದಿಂದ ವಿಮುಕ್ತನಾಗುತ್ತಾನೆ. ಇದರ ಪ್ರತಿಕ್ರಿಯೆಯಾಗಿ ವ್ಯಾಸರು ಪ್ರತಿ ಷರತ್ತಾಗಿ ತಾವು ಹೇಳುವ ಚರಣವನ್ನು ಅರ್ಥ ಮಾಡಿಕೊಂಡು ಬರೆಯುವುದಾಗಿ ತಿಳಿಸುತ್ತಾರೆ. ಅದಕ್ಕೆ ಗಣೇಶನು ಒಪ್ಪುತ್ತಾನೆ. ವ್ಯಾಸರು ನಿರೂಪಣೆಯನ್ನು ಪ್ರಾರಂಭಿಸುತ್ತಾರೆ. ಸಾಂದರ್ಭಿಕವಾಗಿ ವ್ಯಾಸರು ಕ್ಲಿಷ್ಟಕರವಾದ ಚರಣವನ್ನು ಭೋದಿಸುತ್ತ, ಗಣೇಶನು ಇದನ್ನು ಅರ್ಥೈಸುವ ಕೆಲವೇ ಕ್ಷಣಗಳಲ್ಲಿ ವ್ಯಾಸರಿಗೆ ಮುಂದಿನ ಚರಣವನ್ನ ಸೃಷ್ಟಿಸುವ ಅವಕಾಶ ದೊರಕುತ್ತಿತ್ತು. ಹೀಗೆ ಜುಗಲ್ಬಂದಿಯಾಗಿ ವ್ಯಾಸರು ಹಾಗೂ ಗಣೇಶನು ಮಹಾಭಾರತವನ್ನು ಸರಿ ಸುಮಾರು 18 ಪರ್ವಗಳಲ್ಲಿ ರಚಿಸುತ್ತಾರೆ.
No comments:
Post a Comment